Âಮುತ್ತಿನ ಮಳೆÂ ಎಂತ ಅನುಭವ!
- IndiaGlitz, [Thursday,October 10 2013]
ಮುತ್ತು ಕೊಟ್ಟೋಳು ಬಂದಾಗ ತುತ್ತು ಕೊಟ್ಟೋಳು ಬೇಡವಾದಳು....ಮಳೆಗಾಲದ ಮುತ್ತು ಎಂದೆಂದೂ ಪ್ರೇಮಿಗಳು ಬಯಸುವ ಘಳಿಗೆ. ಮಾತೆ ಮುತ್ತು ಅಂತಲೂ ಹೇಳುವುದು ಉಂಟು. ಒಟ್ಟಿನಲ್ಲಿ ಮಳೆಗಾಲದ ಹಿನ್ನಲೆ ಅಲ್ಲಿ ಸಿನೆಮಗಳು ಬೇಕಾದಷ್ಟು ಬಂದಿವೆ ಹೋಗಿವೆ. ಮುತ್ತಿನ ಹಾರ ನೋಡಿದ ಕನ್ನಡ ಪ್ರೇಕ್ಷಕ ಈಗ ಮುತ್ತಿನ ಮಳೆ ಗೆ ಸಿದ್ದವಾಗಬೇಕಿದೆ.
ಸಧ್ಯಕ್ಕೆ ಮಂಜು ಸಾಗರ ಅವರ ಮುತ್ತಿನ ಮಳೆ ಸಿನೆಮಾ ಮೊದಲ ಹಂತದ ವಿಚಾರಕ್ಕೆ ಬರೋಣ. 12 ದಿವಸಗಳಲ್ಲಿ ಚಿಕ್ಕ್ಮಗಳೂರು ಸುತ್ತ ಮುತ್ತ ಮೊದಲ ಹಂತ ಮುಗಿಸಿದೆ. ಒಂದು ಹಾಡು ಹಾಗೂ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.
ಮಂಜು ಸಾಗರ್ ಅವರು ಪ್ರಪ್ರಥಮ ನಿರ್ದೇಶನದಲ್ಲಿ ತಾವೇ ನಿರ್ಮಾಪಕರು ಆಗಿ ಚಿತ್ರದ ನಾಯಕರು ಹೌದು. ಅವರು ಈ ಹಿಂದೆ ನಿರ್ದೇಶಕ ಪ್ರೇಮ್ ಕೊಡ್ಲು ರಾಮಕೃಷ್ಣ ಅವರ ಜೊತೆಯಲ್ಲಿ ಕೆಲವು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಇಟ್ಟುಕೊಂಡಿದ್ದಾರೆ.
ಮಂಜು ಸಾಗರ್ ಅವರು ಚಿತ್ರಕ್ಕೆ ಮತ್ತೊಂದು ಪ್ರಮುಖ ನಾಯಕನ ಹುಡುಕಾಟದಲ್ಲಿ ಇದ್ದಾರೆ. ಆ ಪಾತ್ರವನ್ನು ಪರಿಚಿತ ವ್ಯಕ್ತಿಯೇ ಮಾಡಬೇಕು. ಅವರ ಮನಸ್ಸಿನಲ್ಲಿ ರಮೇಶ್ ಅರವಿಂದ್ ಅಥವಾ ಅಜಯ್ ರಾವು ಆದರೆ ಓಕೆ.ಆ ಪಾತ್ರವು ಸಿನೆಮಾದ ಬಹು ಮುಖ್ಯ ಅಂಗ ಸಹ ಎನ್ನುತ್ತಾರೆ ಅವರು.
ಮುತ್ತಿನ ಮಳೆ ಚಿತ್ರದ ನಾಯಕಿ ಆಗಿ ರಮಣಿತು ಚೌಧರಿ ಮತ್ತೊಮ್ಮೆ ಆಗಮಿಸಿದ್ದಾರೆ ಪಲ್ಲಕ್ಕಿ ಧನುಷ್ ಮಿಸ್ಟರ್ ಪೇಯಿಂಟರ್ ಬೆಳದಿಂಗಳಾಗಿ ಬಾ ಪಯಣ ಪ್ರೀತಿಯಿಂದ ರಮೇಶ್ ಚಿತ್ರಗಳಲ್ಲಿ ಅಭಿನಯಿಸಿದ ಅನುಭವಿ ನಟಿ.
ಪೋಷಕ ಪಾತ್ರಗಳಲ್ಲಿ ಅವಿನಾಷ್ ಡಾಕ್ಟರ್ ಶ್ರೀನಾಥ್ ರಂಗಾಯಣ ರಘು ವಿನಯಪ್ರಕಾಶ್ ಧರ್ಮ ಹಾಗೂ ಇನ್ನಿತರರು ಇದ್ದಾರೆ.
ಯುವ ಸಂಗೀತ ನಿರ್ದೇಶಕ ಎ ಟಿ ರವೀಶ್ ಅವರು ಈಗಾಗಲೇ ಎಲ್ಲ ಹಾಡುಗಳನ್ನು ಸಿದ್ದ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಹಾಡು ಚಿತ್ರಿಕರಣವೂ ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಆಗಿದೆ. ಪ್ರದೀಪ್ ಗಾಂಧಿ ಅವರು ಈ ಚಿತ್ರದ ಛಾಯಾಗ್ರಾ